ಜೈನ ಸಮಾಜದ ಹುಡುಗಿಯರು 9 ತಿಂಗಳು UPSC/KAS ತರಬೇತಿಗಾಗಿ ಮುಸ್ಲಿಂ ಧರ್ಮದ ಹಜ್ ಭವನದಲ್ಲಿ ಇರುವುದು ಎಷ್ಟು ಸರಿ?

ಅಲ್ಪಸಂಖ್ಯಾತ ವಿಭಾಗ ಕಡೆಯಿಂದ UPSC/KAS ಮತ್ತು ಇನ್ನಿತರ ಸರಕಾರದ ಹುದ್ದೆಗಳಿಗಾಗಿ ಉಚಿತವಾಗಿ ಪ್ರತಿಷ್ಟಿತ್ ತರಬೇತಿ ಕೇಂದ್ರಗಳಲ್ಲಿ ತರಬೇತಿ ಸಿಗುತ್ತಿತ್ತು, ಜೊತೆಗೆ ಪ್ರತಿ ತಿಂಗಳು ಊಟ ಮತ್ತು ವಸತಿ ಸಲುವಾಗಿ stipend ಕೊಡುತ್ತಿದ್ದರು ಆದರೆ ಹಿಂದಿನ ವರ್ಷದಿಂದ ಬೆಂಗಳೂರಿನ ಮುಸ್ಲಿಂ ಧರ್ಮದ ಹಜ್ ಭವನದಲ್ಲಿ ತರಬೇತಿ ಕೊಡುವ ನಿರ್ಣಯ ಅಲ್ಪಸಂಖ್ಯಾತ ವಿಭಾಗ ತೆಗೆದುಕೊಂಡಿದ್ದಾರೆ. ಅಂದರೆ 9 ತಿಂಗಳು ಅಥವಾ ತರಬೇತಿ ಮುಗಿಯುವ ವರೆಗೆ ಹಜ್ ಭವನದಲ್ಲೇ (ಹಜ್ ಭವನದ ವಸತಿ ಗ್ರಹದಲ್ಲಿ) ಜೈನ ಧರ್ಮದ ಹುಡುಗ ಮತ್ತು ಹುಡುಗಿಯರು ಇರುವ ಅನಿವಾರ್ಯ ಪರಸ್ಥಿತಿ ಬಂದಿದೆ. ಈ ನಿರ್ಣಯದಿಂದ ಜೈನ ಸಮಾಜದ ಪ್ರತಿಭಾವಂತ ಹುಡುಗರು/ಹುಡಿಗಯರಲ್ಲಿ ಆತಂಕ ಉಂಟಾಗಿದೆ. ಜೈನ ಧರ್ಮದ ಸಂಸ್ಕೃತಿ, ಸಭ್ಯತೆ, ಆಹಾರ ಪದ್ಧತಿಯ ಜೊತೆಗೆ ಧರ್ಮದ ಆಚರಣೆ ಬೇರೆ ಅಲ್ಪಸಂಖ್ಯಾತರಕ್ಕಿಂತ ಬಹಳಷ್ಟು ಭಿನ್ನಾವಾಗಿದೆ. ಹೀಗಾಗಿ. ನಮ್ಮ್ ಸಮಾಜದ ಹುಡುಗಿಯರು 9 ತಿಂಗಳು ತರಬೇತಿಗಾಗಿ ಹಜ್ ಭವನದಲ್ಲಿ ಇರುವುದು ಎಷ್ಟು ಸರಿ? ಈ ಬಗ್ಗೆ ಅಲ್ಪಸಂಖ್ಯಾತ ವಿಭಾಗದ ಸಚಿವರು ಮತ್ತು ಕಾರ್ಯದರ್ಶಿಗಳಿಗೆ ಇಂದು ಪತ್ರ ಬರೆದು ಜೈನ ವಿದ್ಯಾರ್ಥಿಗಳಿಗೆ ಖಾಜಗಿ ಪ್ರತಿಷ್ಟಿತ್ ತರಬೇತಿ ಕೇಂದ್ರಗಳಲ್ಲಿ ಪ್ರವೇಶ ಮಾಡಿಸಿ ಕೊಡಬೇಕು ಅದರ ಜೊತೆಗೆ ಪ್ರತಿ ತಿಂಗಳು ಊಟ ಮತ್ತು ವಸತಿ ಸಲುವಾಗಿ stipend ಕೊಡಬೇಕಾಗಿ ಪತ್ರ ಬರೆಯಲಾಗಿದೆ. ಈ ವಿಷಯದ ಜೈನ ಸಮಾಜ ಒಟ್ಟಿಗೆ ಸೇರಿಕೊಂಡು ಸರಕಾರ ಮೇಲೆ ಒತ್ತಡ ತರಬೇಕಾಗಿ ವಿನಂತಿಸುತ್ತೇವೆ.

MissionJainism
———————-
ಮಹೇಶ ಜೈನ
ಗ್ಲೋಬಲ್ ಮಹಾಸಭಾ